Pesquisar
Close this search box.
Pesquisar
Close this search box.

ಬಜೆಟ್ 2021: ಸಂಕಷ್ಟದ ಪರಿಸ್ಥಿತಿಯಲ್ಲೂ ವಿಶ್ವಾಸ ಮೂಡಿಸಿದ ಬಜೆಟ್

ಭಾರತದ ಸೇರಿದಂತೆ ಇಡೀ ವಿಶ್ವವೇ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಆದಾಗ್ಯೂ ಜನರಲ್ಲಿ ವಿಶ್ವಾಸ ಮೂಡಿಸುವ ಬಜೆಟ್‌ನ್ನು ನಿರ್ಮಲಾ ಸೀತಾರಾಮ್ ಮಂಡಿಸಿದ್ದಾರೆ ಎಂದು ವಧ್ವನಿ ಕ್ಯಾಟಲಿಸ್ಟ್‌ ಫಂಡ್‌ನ ರತ್ನಾ ಮೆಹ್ತಾ ತಿಳಿಸಿದ್ದಾರೆ.

ವಿತ್ತೀಯ ಕೊರತೆಯನ್ನು ಸಂಬಾಳಿಸಿಕೊಂಡು ಆರ್ಥಿಕತೆಗೆ ಜೀವ ತುಂಬುವ ಸಂಧಿಗ್ದತೆಯಲ್ಲಿ ನಿರ್ಮಲಾ ಸೀತಾರಾಮನ್ ಇದ್ದರು. ಇಂದು ನಡೆದ ಆ ಸತ್ವ ಪರೀಕ್ಷೆಯಲ್ಲಿ ನಿರ್ಮಲಾ ಉತ್ತೀರ್ಣರಾಗಿದ್ದಾರೆ.

ಉದ್ಯೋಗ ಸೃಷ್ಟಿ ಹಾಗೂ ಮಾರುಕಟ್ಟೆಯಲ್ಲಿನ ಬಳಕೆ ಹೆಚ್ಚಾಗುವ ನಿಟ್ಟಿನಲ್ಲಿ ಕ್ರಮಗಳನ್ನು ಘೋಷಿಸಲಾಗಿದೆ ಎಂದು ಹೇಳಿದ್ದಾರೆ.ಇದಲ್ಲದೆ ಈ ಕ್ಷಣದ ಅಗತ್ಯವಾದ ಆರೋಗ್ಯ ವಲಯದ ಅಭಿವೃದ್ಧಿಗೂ ಗಮನ ನೀಡಿರುವುದು ಪ್ರಮುಖವಾದ ವಿಚಾರ.

ಆರೋಗ್ಯ ಇಲಾಖೆಯ ಅನುದಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಹಾಗೆಯೇ ಸ್ಟಾರ್ಟ್ ಅಪ್ ಮೇಲಿನ ವಿನಾಯಿತಿ ಮುಂದುವರೆಸುವುದು ಸ್ವಾಗತಾರ್ಹ. ಡಿಜಿಟಲೀಕರಣಕ್ಕೆ ಒತ್ತು,ಶಿಕ್ಷಣ, ಲಾಜಿಸ್ಟಿಕ್ಸ್ ಹಾಗೂ ಆರೋಗ್ಯಕ್ಕೆ ಒತ್ತು ನೀಡುವುದು ಭವಿಷ್ಯದಲ್ಲಿ ಉತ್ತಮ ಫಲಿತಾಂಶ ನೀಡಲಿದೆ.

Source:
Kannada One India
The News 24  Kannada
Business News This Week

More Press Coverage

We use necessary cookies and/or similar technologies to make this website work and to collect information when you interact with this website to improve your experience. By using This website, you acknowledge and consent to our cookie policy and privacy policy